ಕವಚ 2019 ರ ಕನ್ನಡ ಭಾಷೆಯ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಜಿ.ವಿ.ಆರ್ ವಾಸುರವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ, ಇದು ಅವರ ನಿರ್ದೇಶನದ ಮೊದಲನೆಯ ಚಿತ್ರ. ಇದು 2016 ರ ಮಲಯಾಳಂ ಚಿತ್ರ ಒಪ್ಪಂ ನ ರಿಮೇಕ್ ಆಗಿದ್ದು, ಕನ್ನಡ ಮಾತನಾಡುವ ಪ್ರೇಕ್ಷಕರ ಹಿತಾಸಕ್ತಿಗೆ ತಕ್ಕಂತೆ ಚಿತ್ರಕಥೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್, ಕೃತಿಕಾ ಜಯಕುಮಾರ್, ಇಶಾ ಕೊಪ್ಪಿಕರ್, ಬೇಬಿ ಮೀನಾಕ್ಷಿ ಮತ್ತು ವಸಿಷ್ಠ ಎನ್.ಸಿಂಹ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವು 5 ಏಪ್ರಿಲ್ 2019 ರಂದು ರಾಜ್ಯದ್ಯಂತ ಬಿಡುಗಡೆಯಾಯಿತು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. == ಕಥಾವಸ್ತು == ಜಯರಾಮ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ವಾಸಿಸುವ ಒಬ್ಬ ಕುರುಡ. ಅಲ್ಲಿ ವಾಸಿಸುವ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಅವನನ್ನು ನಂಬಿ ಕೊಲೆಯಾಗುವ ಮೊದಲು ಅವನ ಮಗಳ ರಕ್ಷಕನನ್ನಾಗಿ ಮಾಡಿದಾಗ, ಜಯರಾಮನ ಪ್ರಪಂಚವು ಬದಲಾಗುತ್ತದೆ. ಅವನು ಈಗ ಪ್ರತೀಕಾರದ ಸರಣಿ ಕೊಲೆಗಾರ ವಾಸುದೇವನನ್ನು ಎದುರಿಸಬೇಕಾಗಿದೆ. == ಪಾತ್ರವರ್ಗ == ಜಯರಾಮ/ರಾಮಪ್ಪನಾಗಿ ಶಿವ ರಾಜ್‌ಕುಮಾರ್ ರೇವತಿಯಾಗಿ ಕೃತಿಕಾ ಜಯಕುಮಾರ್ ಗೌರಿ ಪಾತ್ರದಲ್ಲಿ ಇಶಾ ಕೊಪ್ಪಿಕರ್ ನಂದಿನಿಯಾಗಿ ಬೇಬಿ ಮೀನಾಕ್ಷಿ ವಾಸುದೇವನಾಗಿ ವಸಿಷ್ಠ ಎನ್. ಸಿಂಹ ಇತಿ ಆಚಾರ್ಯ ರವಿ ಕಾಳೆ == ನಿರ್ಮಾಣ == 2016 ರ ನವೆಂಬರ್‌ನಲ್ಲಿ ಪ್ರಿಯದರ್ಶನ್ ತಮ್ಮ ಮಲಯಾಳಂ ನಿರ್ದೇಶನದ ಒಪ್ಪಂ ಚಿತ್ರದ ಕನ್ನಡ ರೀಮೇಕ್ ನಲ್ಲಿ ಶಿವ ರಾಜ್‌ಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಖಚಿತ ಪಡಿಸಿದರು.ರೀಮೇಕ್ ಆದ ಕವಚ ಚಿತ್ರವನ್ನು ಎಂ.ವಿ.ವಿ ಸತ್ಯನಾರಾಯಣ ಮತ್ತು ಎ.ಸಂಪತ್ತ್ ತಮ್ಮ ಹಯಗ್ರೀವ ಮೂವಿ ಅಧಿಷ್ಠಾನ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ ಮತ್ತು ಇದು ಜಿ.ವಿ.ವಾಸುರವರು ನಿರ್ದೇಶಿಸಿರುವ ಮೊದಲ ಚಿತ್ರ. ಅವರು ಏಳು ತಿಂಗಳಿಗಿಂತ ಹೆಚ್ಚು ಕಾಲ ಚಿತ್ರಕಥೆಗಾಗಿ ಕೆಲಸ ಮಾಡಿದರು, ಕನ್ನಡ-ಮಾತನಾಡುವ ಪ್ರೇಕ್ಷಕರ ಹಿತಾಸಕ್ತಿಗೆ ತಕ್ಕಂತೆ ಅದನ್ನು ಗಣನೀಯವಾಗಿ ಪುನಃ ಬರೆದರು, ಇದರಲ್ಲಿ ಆಕ್ಷನ್ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಯಿತು. ಇಶಾ ಕೊಪ್ಪಿಕರ್ ಅವರನ್ನು ಪೊಲೀಸ್ ಅಧಿಕಾರಿಯಾಗಿ, ಮತ್ತು ವಸಿಷ್ಠ ಎನ್. ಸಿಮ್ಹಾ ಅವರನ್ನು ಖಳನಟನಾಗಿ, ಬೇಬಿ ಮೀನಾಕ್ಷಿಯನ್ನು ಮೂಲ ಚಿತ್ರದಲ್ಲಿ ಮಾಡಿದ ಪಾತ್ರವನ್ನುಇಲ್ಲಿಯೂ ಮಾಡಿದ್ದಾರೆ. ಚಿತ್ರದ ಚಿತ್ರೀಕರಣ 23 ನವೆಂಬರ್ 2017 ರಂದು ಪ್ರಾರಂಭವಾಯಿತು, ಮತ್ತು ಆಗಸ್ಟ್ 2018 ರ ಆರಂಭದಲ್ಲಿ ಕೊನೆಗೊಂಡಿತು. ಮೈಸೂರು, ಊಟಿ ಮತ್ತು ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಿತು. ರಾಹುಲ್ ಶ್ರೀವಾಸ್ತವ್ ಈ ಚಿತ್ರದ ಛಾಯಾಗ್ರಾಹಕ. == ಧ್ವನಿಪಥ == ಧ್ವನಿಪಥವನ್ನು ಅರ್ಜುನ್ ಜನ್ಯಾ ಮತ್ತು 4 ಮ್ಯೂಸಿಕ್ಸ್ ಸಂಯೋಜಿಸಿದ್ದಾರೆ . 4 ಮ್ಯೂಸಿಕ್ಸ್ ಸಂಯೋಜನೆ ಮಾಡಿದ " ರೆಕ್ಕೆಯ" ಹೊರತುಪಡಿಸಿ ಎಲ್ಲಾ ಹಾಡುಗಳನ್ನು ಜನ್ಯಾ ಸಂಯೋಜಿಸಿದ್ದಾರೆ; ಆ ಹಾಡಿಗೆ ಎರಡು ಆವೃತ್ತಿಗಳಿವೆ, ಯುಗಳ ಮತ್ತು ಏಕವ್ಯಕ್ತಿ. == ಉಲ್ಲೇಖಗಳು ==